Saturday, August 18, 2012

ಬಾಂಧವ್ಯ..........



ಎತ್ತಣದ ಮಾಮರ... ಎತ್ತಣದ ಕೋಗಿಲೆ...
ಕಾಲ ಕೂಡಿತೆಂದು ನೀ ಹೇಗೆ ತಿಳಿಯುವೆ...
ಅಮೃತ ಫಲವ ಸವಿದು... ಮೃತನು ಕುಣಿದೇಳುವಂತೆ ನೀ ಉಲಿವೆ........

ಎತ್ತಣದ ನೇಸರು... ಎತ್ತಣದ ತಾವರೆ...
ಮೊಗವರಳಿಸಿ ನಲಿದು ಆತನ ಝಾಡನು ಹಿಡಿವೆ...
ನಿನ್ನ ನಗುವಿನೊಂದಿಗೆ ಅಳುವ ಮನವನೂ ನಗಿಸುವೆ........

ಎತ್ತಣದ ಭ್ರಮರವೋ... ಎತ್ತಣದ ಪುಷ್ಪವೋ...
ನೋವು ಎಣಿಸಲೂ ಆಗದಂತೆ ನೀ ಮಕರಂದವ ಹೀರುವೆ...
ಹೂವಿನ ಮುಗುಳ್ನಗೆಯ ಬಾಡದಂತಿಡುವೆ........

ಅತ್ತಣಿಂದಿತ್ತ ಇತ್ತಣಿಂದಿತ್ತ ಸಂಬಂಧವರಿಯದವರು
ಸುಖಧಿ ಕೂಡಿ ಬಾಳುತಿರಲು.... ಎಲ್ಲವನು ತಿಳಿದ ಮನುಜ
ನಿನಗೇತಕೀ ನೋವನೀಡಿ ನಗುವ ಮರುಳು.........................